in

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ

ಭಾರತದ ಹಿಂದೂ ಧರ್ಮದಲ್ಲಿ  ವ್ಯಾಸರು ಬರೆದ ಮಹಾಭಾರತ ಕಾವ್ಯ ಶ್ರೇಷ್ಟವಾದದ್ದು. ಒಳ್ಳೆಯದು, ಕೆಟ್ಟದ್ದು, ಆಸೆ, ದುರಾಸೆ, ಅವಮಾನ, ಸೇಡು, ಶಾಪ, ಕಣ್ಣೀರು ಎಲ್ಲವನ್ನೂ ಅರ್ಥ ಮಾಡಿಸುವ ಪಾಠ ಮಹಾಭಾರತದಲ್ಲಿದೆ. ಮಹಾರಾಜ ಶಂತನು ಮಾಡಿದ ಒಂದು ತಪ್ಪಿನಿಂದ ಇಡೀ ಭರತ ಖಂಡದ ಪ್ರಜೆಗಳು ನೋವನ್ನು ಅನುಭವಿಸ ಬೇಕಾಯಿತು. ತನ್ನ ಇಳಿ ವಯಸ್ಸಲ್ಲಿ ಹೆಣ್ಣಿನ ಆಸೆಗೆ ಬಿದ್ದನು. ಅವನಿಗೆ ತನ್ನ ಪ್ರಜೆಗಳ ಸುಖಕ್ಕಿಂತ ತನ್ನ ಸ್ವಂತ ಸುಖ ಹೆಚ್ಚಾಯಿತು. ಕುರುಕ್ಷೇತ್ರ ಯುದ್ಧ ಅದೆಷ್ಟು ಅಮಾಯಕರ ಕಣ್ಣೀರಿಗೆ, ಸಾವಿಗೆ ಕಾರಣವಾಗಿತ್ತು. ಅಂತಹ ಗಂಗಾ ಪುತ್ರ ಭೀಷ್ಮ ನಂತಹ ಅಪ್ರತಿಮ ಮಹಾರಾಜ ಈ ಭೂಮಿಯನ್ನು ಆಳಬಹುದಿತ್ತು. ಕುರುಕ್ಷೇತ್ರ ಎಂಬ ಭಯಾನಕ ನಡೆಯುತ್ತಿರಲಿಲ್ಲ. ಆದರೆ ವಿದಿಲಿಕಿತ ಬೇರೆಯೇ ಇತ್ತು. ಯುಗ ನಾಶವಾಗಬೇಕಿತ್ತು.

ಮಹಾಭಾರತದಲ್ಲಿನ ಅತ್ಯಂತ ಕುತೂಹಲಕಾರಿ ಪಾತ್ರಗಳಲ್ಲಿ ‘ಶಕುನಿ’ ಪಾತ್ರ ಕೂಡ ಒಂದು. ಇಂದಿಗೂ ಕೂಡ ಜನರು ಶಕುನಿಯನ್ನು ದೂಷಿಸುತ್ತಾರೆ. ಸೇಡು ತೀರಿಸಿಕೊಳ್ಳುವ ಮನೋಭಾವದವರನ್ನು, ಮೋಸ ಮಾಡುವ ಮನೋಭಾವದವರನ್ನು, ಕುತಂತ್ರ ಬುದ್ಧಿಯುಳ್ಳವರನ್ನು ನೋಡಿದಾಗಲೆಲ್ಲಾ ಅವರನ್ನು ಆಡು ಮಾತಿನಲ್ಲಿ ಅವನೊಬ್ಬ ಶಕುನಿಯೆಂದು ಹೇಳುವುದುಂಟು.

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ

ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕೃಷ್ಣನೇ ಸಾರಥಿ. ಧರ್ಮದ ರಕ್ಷಣೆಗಾಗಿ ಮಹಾವಿಷ್ಣು ಕೃಷ್ಣನ ಅವತಾರ ತಾಳಬೇಕಾಯಿತು. ಪರಮಾತ್ಮ ಕೃಷ್ಣನಸ್ಟೆ ಬುದ್ಧಿವಂತ ಶಕುನಿ. ಆದರೆ ತನ್ನ ಬುದ್ದಿವಂತಿಕೆಯನ್ನು ಒಂದು ವಂಶದ ನಾಶಕ್ಕಾಗಿ, ಸೇಡಿಗಾಗಿ ಉಪಯೋಗಿಸಿದ ಗಾಂಧಾರ ರಾಜ ಶಕುನಿ. ತಂದೆ  ಸುಬಲ, ತಾಯಿ ಸುಧರ್ಮ. ಶಕುನಿಯ ಮುದ್ದಿನ ತಂಗಿ ಗಾಂಧಾರಿ. ಶಕುನಿಯು ಹೆಚ್ಚಾಗಿ ಹಸ್ತಿನಾಪುರದಲ್ಲೇ ತನ್ನ ದಿನಗಳನ್ನು ಕಳೆದಿರುವುದರಿಂದ ಆತನು ತನ್ನ ಕುಟುಂಬಕ್ಕೆ ಅಷ್ಟೊಂದು ಒತ್ತು ನೀಡಿರಲಿಲ್ಲ. ಆದರೆ ಶಕುನಿಗೆ ಉಲುಕ ಮತ್ತು ವೃಕಾಸುರ ಎನ್ನುವ ಇಬ್ಬರು ಗಂಡು ಮಕ್ಕಳಿದ್ದರು ಎಂದು ಹೇಳಲಾಗುತ್ತದೆ.

ಶಕುನಿ ಮಹಾಭಾರತದ ಬಹಳ ಪ್ರಮುಖ ಪಾತ್ರ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧಾರಿಯ ೧೦೦ ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಾಭಾರತದ ಯುದ್ದಕ್ಕೆ ಮತ್ತು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ. ಇಷ್ಟೊಂದು ಕುತಂತ್ರ, ಮೋಸವನ್ನು ಮಾಡಿ, ದುರ್ಯೋಧನನನ್ನು ಯುದ್ಧಕ್ಕೆ ಪ್ರೇರೇಪಿಸಿ, ಇಡೀ ಕುರುಕುಲವೇ ನಾಶವಾಗುವಂತೆ ಮಾಡಿದವನು ಶಕುನಿ. ಭೀಷ್ಮರಿಂದ ತನ್ನ ಗಾಂಧಾರ ನಾಶವಾದಂತೆ, ಹಸ್ತಿನಾಪುರದಲ್ಲೂ ರಕ್ತದ ಕೋಡಿ ಹರಿಯಲಿ, ಕುರುವಂಶ ನಾಶವಾಗಲಿ ಎಂಬುದು ಅವನ ಉದ್ದೇಶವಾಗಿತ್ತು. ಮುಂದೆ ಇವನೂ ಕುರುಕ್ಷೇತ್ರ ಯುದ್ಧದಲ್ಲಿ ಸಹದೇವನ ಜೊತೆ ಯುದ್ಧ ಮಾಡಿ, ಸಾಯುತ್ತಾನೆ. ಆದರೆ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಾನೆ. ಧರ್ಮಾತ್ಮರಾದ ಪಾಂಡವರು ಸೋಲುವುದಿಲ್ಲ ಎಂದು ಆತನಿಗೆ ಗೊತ್ತಿದ್ದೇ ಇತ್ತು. ನಿಜಕ್ಕೂ ಆತ ಮೋಸ ಮಾಡಿದ್ದು ಧರ್ಮರಾಯನಿಗಲ್ಲ, ಕುರುವಂಶಕ್ಕೆ- ದುರ್ಯೋಧನ, ಧೃತರಾಷ್ಟ್ರರಿಗೆ.

ಶಕುನಿಯ ದ್ವೇಷಕ್ಕೆ ಕಾರಣ ಏನು?

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ

ನಿಜವಾಗಿಯೂ ನೋಡುವಂತೆ ಶಕುನಿಗೆ ಕೌರವರಲ್ಲಿ ಯಾವ ಪ್ರೀತಿಯೂ ಇರಲ್ಲಿಲ್ಲ. ತಂದೆಯ(ಸುಬಲ) ಅವಮಾನದ ದ್ವೇಷ, ತಂಗಿಯ (ಗಾಂಧಾರಿ)ಜೀವನವೇ ಹಾಳು ಮಾಡಿದರು ಎಂಬ ಸಿಟ್ಟು . ಗಾಂಧಾರಿ ಮದುವೆ ಆದರೆ ಮೊದಲನೇ  ಗಂಡ  ತೀರಿಹೋಗುತ್ತಾನೆ ಎಂದು ಇತ್ತು ಜಾತಕದಲ್ಲಿ. ಹಾಗಾಗಿ ಸುಬಲನು ಒಂದು ಮೇಕೆಯೊಂದಿಗೆ ಗಾಂಧಾರಿಯ ವಿವಾಹ ಮಾಡಿ ಆ ಮೇಕೆಯನ್ನು ಕೊಲ್ಲಿಸುತ್ತಾನೆ. ಗಾಂಧಾರಿ ತನ್ನ ತಪಸ್ಸಿನ ಫಲದಿಂದ ಮಹಾಶಿವನಿಂದ ನೂರು ಮಕ್ಕಳ ವರ ಪಡೆದಿದ್ದಳು. ರಾಜಮಾತೆ ಸತ್ಯವತಿಯ  ದುರಾಸೆಯ ಕಾರಣ, ಮಾತೆಯ ಆದೇಶದ ಮೇರೆಗೆ  ಭೀಷ್ಮರು ಗಾಂಧಾರಕ್ಕೆ ಹೋಗುತ್ತಾರೆ. ಅಂದನಾದ ದೃತರಾಷ್ಟ್ರನಿಗೆ ಹೆಣ್ಣು ಕೇಳಲು. ಹಸ್ತಿನಾಪುರದ ಮಹನಾಯಕ  ಭೀಷ್ಮರನ್ನು ಎದುರಿಸುವ ಶಕ್ತಿ ಇಡೀ ದೇಶದಲ್ಲಿ ಯಾವ ರಾಜನಿಗೂ ಇರಲ್ಲಿಲ್ಲ. ಹಾಗಾಗಿ ಗಾಂಧಾರ ರಾಜ್ಯದ ಪ್ರಜೆಗಳಿಗಾಗಿ ಒಪ್ಪಿಕೊಳ್ಳಬೇಕಾಯಿತು. ತಾನು ಮದುವೆಯಾಗುವ ದೃತರಾಷ್ಟ್ರ ಅಂದ ಎಂದು ಗೊತ್ತಾದ ಗಾಂಧಾರಿ ತಾನೂ ಕೂಡ ತನ್ನ ಜೀವನದಲ್ಲಿ ಬೆಳಕನ್ನು ನೋಡುವುದಿಲ್ಲ ಎಂದು ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುತ್ತಾಳೆ. ಇದ್ದನ್ನು ಕಂಡ ಶಕುನಿಗೆ ತನ್ನ ಮುದ್ದಿನ ತಂಗಿಯ ಜೀವನ ಹಾಳು ಮಾಡಿದ ಭೀಷ್ಮರ ವಂಶ ನಾಶ ಮಾಡುತ್ತೇನೆ ಎಂದು  ಶಪಥ ಮಾಡುತ್ತಾನೆ. ಕೌರವರ ಆತ್ಮೀಯನಂತೆ ನಟಿಸುತ್ತಾನೆ.

ಶಕುನಿಯ ದ್ವೇಷಕ್ಕೆ ಇನ್ನೊಂದು ಕಾರಣ

ಗಾಂಧಾರಿ ವಿಧವೆ (ಮೇಕೆ ಯನ್ನು ಕೊಲ್ಲಿಸಿದ ನಂತರ)  ಎಂದು ದೃತರಾಷ್ಟ್ರ ನಿಗೆ ಗೊತ್ತಾದ ಮೇಲೆ ತನಗೆ ಹೆಣ್ಣು ಕೊಟ್ಟ ಮಾವ ಎಂದು ನೋಡದೆ ಸುಬಲ ಮತ್ತು ಆತನ ನೂರು ಜನ ಗಂಡುಮಕ್ಕಳನ್ನು ಕಾರಾಗೃಹಕ್ಕೆ ತಳ್ಳಿ ಹಿಂಸೆ ಕೊಡುತ್ತಾನೆ. ಅನ್ನ ,ನೀರು ಕೊಡದೆ ಸಾಯಿಸಲು ನಿರ್ಧರಿಸುತ್ತಾನೆ. ದಿನಕ್ಕೆ ಒಂದು ತುತ್ತು ಅನ್ನ ಮಾತ್ರ ಎಸೆಯುತ್ತಿದ್ದರು. ಅದರಲ್ಲಿ ಸುಬಲ ಮತ್ತು ಅವನ ನೂರು ಮಕ್ಕಳು ಬದುಕಲು ಆಗುತ್ತಿರಲಿಲ್ಲ. ಒಬ್ಬೊಬ್ಬರಾಗಿ ಸಾಯುತ್ತಾ ಬರುವಾಗ, ಸುಬಲನು ಒಂದು ನಿರ್ಧಾರ ಮಾಡಿ ನಿಮ್ಮಲ್ಲಿ  ಒಬ್ಬ ಬದುಕಬೇಕು, ದೃತರಾಷ್ಟ್ರನ ವಂಶ ನಾಶಮಾಡಬೇಕು, ಅದಕ್ಕೆ ಸೂಕ್ತ ಕೊನೆಯವನಾದ ಶಕುನಿ ಮಾತ್ರ ಎಂದು, ಎಲ್ಲರ ಪಾಲಿನ ಅನ್ನವನ್ನು ಒಬ್ಬನಿಗೆ ಕೊಟ್ಟು ಅವನು ಬದುಕುವಂತೆ ನೋಡಿಕೊಳ್ಳುತ್ತಾನೆ. ಸಾಯುವ ಮೊದಲು ತನ್ನ ತಪ್ಪಾಯಿತು, ನನ್ನ ಒಬ್ಬ ಮಗನನ್ನಾದರೂ ಬದುಕಲು ಅವಕಾಶ ಮಾಡಿಕೊಡಿ ಎಂದು ದೃತ ರಾಷ್ಟ್ರನಲ್ಲಿ ಕೇಳಿಕೊಳ್ಳುತ್ತಾನೆ. ಶಕುನಿಗೆ ತನ್ನ ಬೆನ್ನು ಮೂಳೆಯ ಪಗಡೆ ದಾಳ ವನ್ನು ನಿರ್ಮಿಸು, ನಾನು ನೀನು ಹೇಳಿದ ಹಾಗೆ ಕೇಳುತ್ತೇನೆ, ನೀನು ಮನಸ್ಸಿನಲ್ಲಿ ಅಂದುಕೊಂಡ  ಅಂಕವನ್ನು ದಾಳದ ಮೂಲಕ ನೀಡುತ್ತೇನೆ ಎಂದು ತನ್ನ ಪ್ರಾಣ ಬಿಡುತ್ತಾನೆ. ಹೀಗೆ ಶಕುನಿ ಅಣ್ಣ, ತಮ್ಮಂದಿರ ನಡುವೆ ದ್ವೇಷದ ಬೀಜ ಬಿತ್ತಿ, ಹೆಜ್ಜೆ ಹೆಜ್ಜೆಗೂ ಪಾಂಡವರ ಬಗ್ಗೆ ಕೌರವರಲ್ಲಿ ದ್ವೇಷ ಬೆಳೆಯುವಂತೆ ಮಾಡುತ್ತಾನೆ. ಪಗಡೆಯಾಟದಲ್ಲಿ ಪಾಂಡವರನ್ನು ಮೋಸದಿಂದ ಸೋಲಿಸಿ, ಪಾಂಡವರ ಪತ್ನಿಯಾದ ಪಾಂಚಾಲಿಯನ್ನು ತುಂಬಿದ ಸಭೆಯಲ್ಲಿ ಅವಮಾನ ಮಾಡುವಂತ ಪರಿಸ್ಥಿತಿಯನ್ನು ನಿರ್ಮಿಸಿ, ಈಡೀ ಕುರುಕ್ಷೇತ್ರ ರಕ್ತ ಸಿಕ್ತವಾಗುವಂತೆ ಮಾಡುತ್ತಾನೆ. ಅಸಲಿಗೆ ಶಕುನಿ ಕೌರವರ ಆಪ್ತನೆ  ಅಲ್ಲ. ಕೊನೆಯಲ್ಲಿ ಕೃಷ್ಣ ಒಂದು ಮಾತು ಹೇಳುತ್ತಾನೆ ಶಕುನಿಗೆ ನೀನು ಇಡೀ ಪ್ರಪಂಚದಲ್ಲಿ ಅತೀ ಬುದ್ಧಿವಂತ, ನಿನ್ನ ಈ ಬುದ್ಧಿಯಿಂದ ಅದೆಷ್ಟು ಒಳ್ಳೆಯ ಕೆಲಸ ಮಾಡಬಹುದಿತ್ತು. ದ್ವೇಷದ ಹೆಸರಿನಲ್ಲಿ ನೀನು ನಾಶ ಮಾಡಿದ್ದು ನಿನ್ನ ಪ್ರೀತಿಯ ತಂಗಿಯ ಕರುಳನ್ನು, ನಿನ್ನ ಸ್ವಂತ ತಂಗಿಯ ಮಕ್ಕಳ್ಳನ್ನು ಎಂದು..

ನಿಮಗೆ ಗೊತ್ತಾ ಇಂತಹ ಶಕುನಿಗೂ ಪೂಜೆ ಮಾಡುತ್ತಾರೆ. ಕೇರಳದಲ್ಲಿ ಶಕುನಿಗೆ ದೇವಸ್ಥಾನವೂ ಇದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ಸಾಮ್ರಾಟ್ ಅಶೋಕ

ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ಸಾಮ್ರಾಟ್ ಅಶೋಕ