in

ದೀಪಾವಳಿ ಹಬ್ಬದ ದಿನ ಮತ್ತು ನಂತರ

ದೀಪಾವಳಿ ಹಬ್ಬ ಅಂದರೆ ದೀಪಗಳ ಹಬ್ಬ. ತಿಂಗಳು ಮುಂಚೆಯೇ ಎಲ್ಲ ರೀತಿಯ ತಯಾರಿ ನಡೆಸಿ ಹಬ್ಬಕ್ಕೆ ತಯಾರಾಗುತ್ತೇವೆ. ಹಬ್ಬ ಅಂದರೆ ಎಲ್ಲೆಲ್ಲೂ ಸಡಗರ ಸಂಭ್ರಮ ಮನೆ ಮಾಡುತ್ತದೆ. ದೀಪಾವಳಿ ಅಂದರೆ ಅದೇನೋ ಬೇರೆ ರೀತಿಯದೇ ಒಂದು ಉತ್ಸಾಹ. ಹೆಣ್ಣು ಮಕ್ಕಳಿಗೆ ರಂಗೋಲಿ ಹಾಕುವುದು, ಮನೆಯನ್ನು ಶೃಂಗಾರಗೊಳಿಸುವುದು, ದೀಪಗಳ ಅಲಂಕಾರವಾದರೆ ಗಂಡು ಮಕ್ಕಳಿಗೆ ಹೊಸ ಬಟ್ಟೆ ತೊಟ್ಟು ಪಟಾಕಿ ಹೊಡೆಯುವ ಸಂಭ್ರಮ. ಹಿಂದೆ ದೀಪಗಳ ಹಬ್ಬ ದೀಪಾವಳಿ ಎಂದು ಕರೆದರೆ ಈಗ ಮಾತ್ರ ಪಟಾಕಿ ಹಬ್ಬ ಎಂದು ಕರೆಯಬಹುದು. ಅಷ್ಟರ ಮಟ್ಟಿಗೆ ನಾವು ಪಟಾಕಿಯ ಬಳಕೆಯಲ್ಲಿ ಮುಳುಗಿದ್ದೇವೆ. ಪಟಾಕಿಯಿಂದ ಆ ಕ್ಷಣದ ಖುಷಿ ಸಿಗುವುದೇ ಹೊರತು ಇದರಿಂದ  ಆಗುವ ದುರಂತಗಳು ಮತ್ತು ಹಾನಿಗಳೇ ಹೆಚ್ಚು.

ಹೊಗೆಯ ಕಿರಿಕಿರಿ: ದೀಪಗಳನ್ನು ಹಚ್ಚುವುದರ ಬದಲು ನಾವು ಪಟಾಕಿ ಹೊಡೆಯುವುದೇ ಹೆಚ್ಚು.ನಾ ಮುಂದು  ತಾ ಮುಂದು ಎಂದು ಅಂಗಡಿಗಳಲ್ಲಿ ಪಟಾಕಿ ಕೊಳ್ಳುವುದರಲ್ಲಿ ಇರುವ ಸಂಭ್ರಮ ಅದರಿಂದಾಗುವ ಮಾಲಿನ್ಯದ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಪಟಾಕಿಯಿಂದ ಹೆಚ್ಚು ಹೊಗೆ ಬಿಡುಗಡೆಯಾಗುತ್ತದೆ. ದೆಹಲಿಯಲ್ಲಿ ಪ್ರತಿ ವರ್ಷ ವಾಯುಮಾಲಿನ್ಯದಿಂದ ಬರುವ ಸ್ಮೋಗ್ನಿಂದ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕಸದ ರಾಶಿ: ನಮಲ್ಲಿ ಕಸದ ಸಮಸ್ಯೆ ಹೆಚ್ಚಾಗಿಯೇ ಇದೆ. ದೈನಂದಿನ ಕೆಲಸ ಕಾರ್ಯಗಳಿಂದ ಉತ್ಪತ್ತಿಯಾಗುವ ಕಸದ ವಿಲೇವಾರಿಯೇ ಕಠಿಣವಾಗಿದೆ. ಇಂಥದ್ದರಲ್ಲಿ ಪಟಾಕಿ ಹೊಡೆಯುವುದರಿಂದ ಅತಿ ಹೆಚ್ಚು ಕಾಗದದ ತುಂಡುಗಳು ಹಾಗು ಡಬ್ಬಗಳು ಕಸದ ರೂಪದಲ್ಲಿ ಮಾರ್ಪಾಡಾಗುತ್ತದೆ. ಪಟಾಕಿಯ ಖುಷಿ ಒಂದೆರಡು ದಿನದ ಮಜವಾದರೆ ಇದರಿಂದ ಹೊರಬಂದಿರುವ ಕಸವು ಸರಿಯಾಗಿ ಸ್ವಚ್ಚಗೊಳಿಸಲಾಗದೆ ತೊಂದರೆಯಾಗುತ್ತದೆ.

ಪ್ರಾಣಿಗಳಿಗೆ ಹಾನಿ:ಹೆಚ್ಚು ಜನರಿಗೆ ಪ್ರಾಣಿಗಳ ಮೇಲೆ ಕಾಳಜಿ ಇದೆ. ದೀಪಾವಳಿ ವಿಷಯದಲ್ಲಿ ಮಾತ್ರ ನಾವು ಇದನ್ನು ಮರೆತಿದ್ದೇವೆ.ಪಟಾಕಿಯ ಸದ್ದಿಗೆ ನಾಯಿ, ಬೆಕ್ಕು ಮತ್ತು ಹಲವು ಪ್ರಾಣಿಗಳಿಗೆ ಕಿವಿಗಳ ತೊಂದರೆಯನ್ನುಂಟುಮಾಡುತ್ತದೆ. ಪಟಾಕಿಯ ಸದ್ದಿನಿಂದ ಪ್ರಾಣಿಗಳು ಭಯಪಡುತ್ತವೆ ಮತ್ತು ಇದರಿಂದಾಗುವ ಮಾಲಿನ್ಯದಿಂದ ಅವಗಳ ಪ್ರಾಣಕ್ಕೂ ಅಪಾಯ ಬರಬಹುದು.

ನಿದ್ರಾ ಭಂಗ: ಎಲ್ಲರಿಗು ಮಲಗುವ ಹಕ್ಕಿದೆ ಆದರೆ ಪಟಾಕಿಯ ಸದ್ದಿನಿಂದ ಅದೆಷ್ಟೋ ಜನರ ನಿದ್ರೆಗೆ ತೊಂದರೆಯಾಗುತ್ತಿದೆ. ಇದಲ್ಲದೆ ಇದರ ಸದ್ದು ಪುಟಾಣಿ ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ವಯಸ್ಸಾದವರಿಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಕೆಟ್ಟ ರೀತಿಯ ಪರಿಣಾಮಬೀರುತ್ತದೆ.

ಬೆಂಕಿ ಅಪಘಾತಗಳು: ಪ್ರತಿ ವರ್ಷ ದೀಪಾವಳಿಯಂದು ಸಾವಿರಾರು ಬೆಂಕಿ ಅಪಘಾತಗಳು ಸಂಭವಿಸುತ್ತವೆ. ಅದೆಷ್ಟೋ ಜನರ ಪ್ರಾಣಕ್ಕೆ ಹಾನಿಉಂಟುಮಾಡುತ್ತದೆ. ಪಟಾಕಿಯಿಂದ ಬರಿ ಹಣ ಪೋಲಾಗುವುದಲ್ಲದೆ ಜನರ ಪ್ರಾಣಕ್ಕೂ ಸಂಚಕಾರ ತಂದೊಡ್ಡುತ್ತದೆ.

ಇನ್ನು ಹಲವಾರು ರೀತಿಯಲ್ಲಿ ಪಟಾಕಿ ಸಿಡಿಸುವುದರಿಂದ ಅನಾನುಕೂಲತೆಗಳೇ ಹೊರತು ಇದರಿಂದ ಯಾವ ಲಾಭಗಳು ಇಲ್ಲ. ಮುಂದಾದರು ನಾವು ಎಚ್ಚೆತ್ತುಕೊಂಡು ಪಟಾಕಿಗಳನ್ನು ದೂರ ಮಾಡಬೇಕು. ದೀಪಾವಳಿ ಅಂದರೆ ದೀಪಗಳ ಹಬ್ಬ ಎಲ್ಲೆಲ್ಲೂ ದೀಪಗಳಿಂದು ಶೃಂಗಾರಗೊಳಿಸಿ ಆಚರಣೆ ಮಾಡೋಣ ಮತ್ತು ಇದರಿಂದ ಆಗುವಂತಹ ಅನಾಹುತಗಳನ್ನು ತಡೆಯೋಣ. ನಮ್ಮ ಸುತ್ತಲಿರುವ ಪರಿಸರವನ್ನು ಸುರಕ್ಷಿಸೋದು ಪ್ರತಿ ಮನುಷ್ಯನ ಕರ್ಥವ್ಯ. ಪಟಾಕಿಯಿಂದ ಪರಿಸರಕ್ಕೆ ಒಗ್ಗುವ ಮಾಲಿನ್ಯವನ್ನು ತಡೆಗಟ್ಟಬೇಕು. ಇನ್ನು ಮುಂದೆ ದೀಪಾವಳಿಯು ದೀಪಗಳಿಂದ ಎಲ್ಲೆಡೆ ಕಂಗೊಳಿಸಲಿ ಮತ್ತು ಪಟಾಕಿಯಿಂದ ಸಂಭವಿಸುವ ಮಾಲಿನ್ಯವನ್ನು ದೂರಮಾಡಲಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವೀಳ್ಯದ ಎಲೆಯ ಆರೋಗ್ಯ ಲಾಭ ಕೇಳಿದ್ದೀರಾ..

ಬ್ಲಡ್ ಪ್ರೆಷರ್( ಬಿ ಪಿ) ಸರ್ವೇ ಸಾಮಾನ್ಯ ರೋಗ