in

ಕನ್ನಡದಲ್ಲಿ : ಹುಟ್ಟುಹಬ್ಬದ ಶುಭಾಶಯಗಳು

ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟುಹಬ್ಬದ ಶುಭಾಶಯಗಳು

ಹುಟ್ಟಿದ ದಿನ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ಹಿಂದೆ ಗುರು, ದೇವರ ಆಶೀರ್ವಾದವನ್ನು ಪಡೆಯುವ ದಿನ ಹುಟ್ಟಿದ ದಿನ, ಇಂದು ವಿದೇಶ ಸಂಸ್ಕೃತಿಯಲ್ಲಿ ಕೊಚ್ಚಿ ಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ದಿನವಿಡೀ ಏನೇ ಮಾಡಿದರೂ ಹಲವು ದಿನಗಳ ಹಿಂದೆ ನಿಯೋಜನೆ ಮಾಡಲಾಗುತ್ತದೆ. ಆಪ್ತೇಷ್ಟರನ್ನು ಆಮಂತ್ರಿಸುತ್ತೇವೆ. ತನ್ನ ಮಗುವಿಗೆ ಯಾವ ಕಾರ್ಟೂನ್ ಇಷ್ಟವಾಗುತ್ತದೆ ಎಂದು ಸೂಕ್ಷ್ಮವಾಗಿ ಗಮನಿಸಿ ‘ದೊರೈಮೊನ್’ ‘ಬಾರ್ನೀ’ ‘ಛೋಟಾ ಭೀಮ್’ ಮುಂತಾದ ಕೇಕ್‌ಗಳನ್ನು ಬಯಸುತ್ತಾರೆ. ಹುಟ್ಟಿದ ದಿನ ಎಲ್ಲರೂ ಸೇರಿ ಮಗು ಮೇಣದ ಬತ್ತಿಗಳನ್ನು ಆರಿಸಿ, ಕೇಕ್ ಕತ್ತರಿಸುವಾಗ ‘ನಿಮಗೆ ಜನ್ಮದಿನದ ಶುಭಾಶಯಗಳು’ ಎಂದು ಹಾಡುತ್ತಾರೆ. ಅದಾದ ನಂತರ ಸಂಗೀತ, ನೃತ್ಯ, ಜಾದೂ, ವಿಚಿತ್ರ ಆಟಗಳ ಮಧ್ಯದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ನಿಜವಾದ ಅರ್ಥವನ್ನು ಮರೆತುಹೋಗುತ್ತಾರೆ!

ಅದೇನೇ ಇರಲಿ ಯಾವ ರೀತಿ ಹುಟ್ಟುಹಬ್ಬವನ್ನು ಆಚರಿಸುತ್ತಿರೋ ಅದು ನಿಮಗೆ ಬಿಟ್ಟಿದ್ದು. ಆದರೆ ಯಾರದೇ ಆಗಲಿ ಹುಟ್ಟುಹಬ್ಬಕ್ಕೆ ನಾವು ಒಂದು ಶುಭಾಶಯ ಕೋರಬೇಕು ಎಂದರೆ ಮನಸ್ಸಿನಿಂದ ಕೋರಬೇಕು ಅಂತಹ ಕೆಲವೊಂದು ಶುಭಾಶಯಗಳು ತಿಳಿಸುವ ಪ್ರಯತ್ನ.

1.ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

2.ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ. ಹುಟ್ಟು ಹಬ್ಬದ ಶುಭಾಶಯಗಳು.

ಕನ್ನಡದಲ್ಲಿ : ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ

3.ವಯಸ್ಸಿಗೂ ಆಯಸ್ಸಿಗೂ ಹುಟ್ಟುಹಬ್ಬದ ಸೇತುವೆ, ನಿನಗೆ ವಯಸ್ಸು ಹೆಚ್ಚಾದಂತೆ ಆಯಸ್ಸೂ ಹೆಚ್ಚಾಗಲಿ, ನನ್ನಿಂದ ನಿನಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳು.

4.ಶುಭ ಮುಂಜಾನೆಯ ಶುಭಾಶಯಗಳೊಂದಿಗೆ, ನಿಮ್ಮ ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ ನಿನ್ನ ಜನ್ಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ ಹುಟ್ಟುಹಬ್ಬದ ಶುಭಾಶಯಗಳು.

5.ದೇವರು ನಿಮಗೆ ಯಾವಾಗಲೂ ಪ್ರೀತಿ, ಸಂತೋಷ ಮತ್ತು ಆಶೀರ್ವಾದಗಳನ್ನು ನೀಡಲಿಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ !

6.ಜೀವನವನ್ನು ನಗುವಿನಿಂದ ಅಳೆಯಿರಿ ಅಳುವಿನಿಂದಲ್ಲ , ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ ವರ್ಷಗಳಲ್ಲ , ಜನ್ಮದಿನದ ಶುಭಾಶಯಗಳು.

7.ನಿನ್ನ ಹುಟ್ಟುಹಬ್ಬ, ನನ್ನ ಸಂಭ್ರಮ : ಇಡೀ ವರ್ಷದಿಂದ ಕಾಯುತ್ತಿದ್ದೆ ಈ ಸುದಿನಕ್ಕೆ, ಬಾಳು ಹಸಿರಾಗಿಸುವ ಶುಭ ಸಂದರ್ಭಕ್ಕೆ, ನೂರು ವರ್ಷ ಸುಖವಾಗಿ ಬಾಳು. ನನ್ನಿಂದ ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

8.ಹುಟ್ಟುಹಬ್ಬದ ಶುಭಾಶಯಗಳು, ಈ ದಿನ ಮತ್ತು ಮುಂದಿನ ವರ್ಷ ನಿಮಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ!

9.ನೀನು ನಿನ್ನ ಲೈಫ ಜರ್ನಿಯ ಪ್ರತಿ ಮೈಲಿಗಲ್ಲನ್ನು ಎಂಜಾಯ್ ಮಾಡುತ್ತಾ ನಿನ್ನ ಗುರಿ ಮುಟ್ಟುವೆ ಎಂಬ ನಂಬಿಕೆ ನನಗಿದೆ . ದೇವರು ನಿನಗೆ ಆ ಶಕ್ತಿ ಕೊಡಲಿ , ಹ್ಯಾಪಿ ಬರ್ಥಡೇ ಗೆಳೆಯ.

10.ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ನೂರ್ಕಾಲ ಬಾಳು ಆರೋಗ್ಯ ಆಯಸ್ಸು ಸಂಸ್ಸುದ್ದಿ ಸುಖ ಸಂತೋಚ್ಚ ನೆಮ್ಮದಿ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುವೆ ಹುಟ್ಟು ಹಬ್ಬದ ಶುಭಾಯಗಳು.

11.ನಡೆದ ಪ್ರತಿ ಹೆಜ್ಜೆಯು ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತ ನೂರಾರು ಕಾಲ ಸುಖವಾಗಿ ಬಾಳು ಖುಷಿಯಾಗಿ ಜೀವಿಸು ಜೀವನದಲ್ಲಿ ಸಕಲ ಸಂಪತ್ತು ನಿನಗೆ ಸಿಗಲಿ, ಹುಟ್ಟುಹಬ್ಬದ ಶುಭಾಶಯಗಳು.

12.ಹಿರಿಯರಿಂದ ಹಿತೈಷಿಗಳಿಂದ ಶುಭ ಹಾರೈಸಿಕೊಳ್ಳುತ್ತಾ ಹಚ್ಚ ಹಸಿರಿನಂತೆ ಹೊಳೆಯುತಿಹಳು ಹೊಂಗನಸಿನ ಹಂಬಲದಿ ಹಂಗಿಲ್ಲದೆ ಹಿಂಜರಿಯದ ಹೆಮ್ಮೆಯಿಂದ ಹೆಜ್ಜೆಯಿಡುತಾ ಹಚ್ಚ ಹಸಿರಿನ ಹಣತೆಯ ಹಚ್ಚುತಿಹಳು. ಹುಟ್ಟುಹಬ್ಬದ ಶುಭಾಶಯಗಳು

13.ಅದ್ಭುತ ಜನ್ಮದಿನವನ್ನು ಹೊಂದಿರಿ, ನಿಮ್ಮ ಪ್ರತಿ ದಿನವೂ ಬಹಳಷ್ಟು ಪ್ರೀತಿ, ನಗು ಮತ್ತು ಸಂತೋಷದಿಂದ ತುಂಬಿರಲಿ ಎಂದು ನಾನು ಬಯಸುತ್ತೇನೆ! ನಾನು ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

14.ಜನ್ಮದಿನದ ಶುಭಾಶಯಗಳು ಈ ಜನ್ಮದಿನ , ನಾನು ನಿಮಗೆ ಸಾಕಷ್ಟು ಸಂತೋಷ ಮತ್ತು ಪ್ರೀತಿಯನ್ನು ಬಯಸುತ್ತೇನೆ , ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಜನ್ಮದಿನದ ಶುಭಾಶಯಗಳು.

15.ಸಂತೋಷದ ಹಾದಿಯಲ್ಲಿ ಸಿಹಿಯ ಲೇಪನ, ನೀ ನಡೆವ ಹಾದಿ ಸದಾ ಹಸಿರಾಗಿರಲಿ, ನಿನ್ನೆಲ್ಲಾ ಆಕಾಂಕ್ಷೆಗಳು ಈಡೇರಲಿ, ಏನೇ ಬಂದರೂ ನಿನ್ನ ಜೊತೆ ನಾನಿರುವೆ, ನನ್ನ ನಲ್ಮೆಯ ಹೃದಯವೇ ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

16.ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು ಆಶೀರ್ವದಿಸಲಿ , ಸುಂದರ ಹೂವು ಸುಗಂಧವನ್ನು ನೀಡಲಿ , ನಾನು ಏನು ನೀಡಲು ಸಾಧ್ಯವಿಲ್ಲ , ಕೊಡುವವನು ನಿಮಗೆ ದೀರ್ಘ ಜೀವನವನ್ನು ಕೊಡಲಿ ಹುಟ್ಟುಹಬ್ಬದ ಶುಭಾಶಯಗಳು.

17.ನಿಮ್ಮ ಹೃದಯವು ಸಂತೋಷದಿಂದ ತುಂಬಿರಲಿಮತ್ತು ನಿಮ್ಮ ಜೀವನವು ಸಂತೋಷದಿಂದ ತುಂಬಿರಲಿ ನಿಮ್ಮ ಜನ್ಮದಿನದಂದು ನಾನು ಬಯಸುತ್ತೇನೆ!

18.ಬಾಳು ಬೆಳಗಲು ನೀನೇ ಸ್ಫೂರ್ತಿ ಇರುಳಿಗೆ ಹಗಲಾಗಿ , ಕತ್ತಲೆಗೆ ದೀಪವಾಗಿ , ಬಳ್ಳಿಗೆ ಆಸರೆಯಾಗಿ ನಮ್ಮೆಲ್ಲರ ಬಾಳು ಬೆಳಗಿದ ನಿನ್ನ ಜೀವನ ಹಸನಾಗಿರಲಿ , ನಿನಗೆ ಜನ್ಮದಿನದ ಶುಭಾಶಯಗಳು.

19.ದೇವರು ನಿಮ್ಮ ಎಲ್ಲಾ ಕನಸುಗಳನ್ನು ನನಸು ಮಾಡಲಿ ಹಾಗೂ ನೆಮ್ಮದಿಯ ಜೀವನ ತಮ್ಮದಾಗಲಿ. ಜನ್ಮದಿನದ ಶುಭಾಶಯಗಳು.

20.ನಿಮಗೆ ಜನ್ಮದಿನದ ಶುಭಾಶಯಗಳು,ನೀವು ಜೀವನಪೂರ್ತಿ ಸಂತೋಷವನ್ನು ಹೊಂದಲಿ ಮತ್ತು ಪ್ರತಿ ದಿನವೂ ನಿಮಗೆ ವಿಶೇಷ ದಿನವಾಗಲಿ!

21.ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಮತ್ತು ಪ್ರತಿದಿನ ನಿಮ್ಮ ಜೀವನದಲ್ಲಿ ಯಶಸ್ವಿಯಾಗಲಿ!ಜನ್ಮದಿನದ ಶುಭಾಶಯಗಳು. ಈ ದಿನವು ನಿಮಗೆ ಅದ್ಭುತವಾದ ದಿನವಾಗಿರಲಿ!

22.ನಿಮ್ಮ ಜೀವನದಲ್ಲಿ ಅದ್ಭುತ ಸಂತೋಷವನ್ನು ತರಲಿ ಎಂದು ನಾನು ಬಯಸುತ್ತೇನೆ . ಹುಟ್ಟುಹಬ್ಬದ ಶುಭಾಶಯಗಳು.

23.ಜನ್ಮದಿನದ ಶುಭಾಶಯಗಳು ಸಹೋದರ, ಈ ಜಗತ್ತಿನಲ್ಲಿ ಅತ್ಯುತ್ತಮ ಸಹೋದರನಾಗಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ದೀರ್ಘ ಮತ್ತು ಸುಂದರ ಜೀವನವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!

24.ಪಂಜರದ ಗಿಣಿ ನೀನಾಗಬಾರದು, ಕತ್ತಲು ನಿನ್ನ ಜೀವನದಲ್ಲಿ ಸುಳಿಯಬಾರದು, ಕಣ್ಣು ಬಿಟ್ಟು ನೋಡು ಹೊರಗಿನ ಪ್ರಪಂಚ, ಬಣ್ಣ ಬಣ್ಣದ ಹಕ್ಕಿಗಳ ಕಲರವದಂತೆ, ಸುಂದರ ಹೂದೋಟದಂತೆ, ಬೆಳೆದು ನಿಂತಿರುವ ಹಸಿರ ಸೊಬಗ ರಾಶಿಯಂತೆ ಕಂಗೊಳಿಸಲಿ ನಿನ್ನ ಬಾಳು, ಓ ನನ್ನ ಮನವೇ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಕನ್ನಡದಲ್ಲಿ : ಹುಟ್ಟುಹಬ್ಬದ ಶುಭಾಶಯಗಳು
ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು

25.ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು, ದೇವರು ನಿಮಗೆ ಆರೋಗ್ಯ, ಸಂಪತ್ತು ಮತ್ತು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ನೀಡಲಿ, ಏಕೆಂದರೆ ನೀವು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ನೀವು ಅದಕ್ಕೆ ಅರ್ಹರು!

26.ಹುಟ್ಟು ಹಬ್ಬದ ಶುಭಾಶಯಗಳು,ಹುಟ್ಟುಹಬ್ಬದ ಶುಭಾಶಯಗಳು. ನಾನು ನಿಮಗೆ ಆರೋಗ್ಯಕರ ಜೀವನವನ್ನು ಬಯಸುತ್ತೇನೆ ಮತ್ತು ನಿಮಗೆ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮ ಜನ್ಮದಿನದಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ!

27.ಕಂಗೊಳಿಸುವ ನಿನ್ನ ಕಣ್ಣುಗಳು, ಮನದ ತುಂಬಾ ತುಂಬಿದ ನಿನ್ನ ನೆನಪುಗಳು, ನಾಚಿಸುವ ನಿನ್ನ ಚಿರಯೌವನ, ಹುಟ್ಟುಹಬ್ಬದ ನೆಪದೊಂದಿಗೆ ಮತ್ತೊಮ್ಮೆ ನಿನ್ನ ಜೊತೆ ಕಾಲಕಳೆಯುವ, ಸಲುಗೆಯಿಂದಿರುವ ಸಂದರ್ಭದ ನಿರೀಕ್ಷೆ ನನ್ನದು. ನಿನಗಾಗಿ ನನ್ನ ಪ್ರೀತಿಯ ಶುಭಕಾಮನೆಗಳು.

28.ಹುಟ್ಟುಹಬ್ಬದ ಶುಭಾಶಯಗಳು,ನಿಮ್ಮ ಜೀವನದಲ್ಲಿ ಎಂದಿಗೂ ನೋವು ಇರದಿರಲಿ ಮತ್ತು ನಿಮ್ಮ ಮುಖದಲ್ಲಿ ಯಾವಾಗಲೂ ಆ ನಗು ಇರಲಿ!

29.ಬಾಳು ಬೆಳಗಲು ನೀನೇ ಸ್ಪೂರ್ತಿ,ಇರುಳಿಗೆ ಹಗಲಾಗಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ ನಮ್ಮೆಲ್ಲರ ಬಾಳು ಬೆಳಗಿದ ನಿನ್ನ ಜೀವನ ಹಸನಾಗಿರಲಿ. ನಿನಗೆ ಜನ್ಮದಿನದ ಶುಭಾಶಯಗಳು.

30.ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಜಗತ್ತಿನ ಎಲ್ಲ ಸಂತೋಷವನ್ನು ನೀಡಲಿ ಮತ್ತು ನಿಮ್ಮ ಎಲ್ಲಾ ಆಸೆಗಳು ಮತ್ತು ಕನಸುಗಳು ಇಂದು ನನಸಾಗಲಿ!

31.ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ, ಮಲ್ಲಿಗೆಯ ಸುವಾಸನೆಯಂತೆ, ಬಿರಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ಇರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ, ನಮ್ಮ ಪುಟ್ಟ ಮಗುವಿಗೆ ಹುಟ್ಟು ಹಬ್ಬದ ಹಾರೈಕೆಗಳು

ಕನ್ನಡದಲ್ಲಿ : ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

32.ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ನೀವು ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲಿ ಮತ್ತು ನಿಮ್ಮ ಜೀವನವು ಸಂತೋಷ ಮತ್ತು ಅದ್ಭುತವಾಗಲಿ!

33.ಮನಸ್ಸಿನ ತಳಮಳ ಹೇಳತೀರದು, ಮಾತು ತಾಳಲಾರದು, ಕಾಯುತ್ತಿದ್ದ ಕಾತುರದ ಕ್ಷಣ ಅದುವೇ ನಿನ್ನ ಜನ್ಮದಿನ. ಮೂರು ನಿಮಿಷದ ನನ್ನ ಹಾರೈಕೆ ನೂರು ವರ್ಷದ ನಿನ್ನ ಆಯಸ್ಸಾಗಲಿ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

34.ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ನೀವು ಯಾವಾಗಲೂ ಅದ್ಭುತ ವ್ಯಕ್ತಿಯಾಗಿದ್ದೀರಿ ಮತ್ತು ನಿಮ್ಮ ಜೀವನವು ಯಾವಾಗಲೂ ಸಂತೋಷ ಮತ್ತು ಉತ್ಸಾಹದಿಂದ ತುಂಬಿರಲಿ!

35.ಸಾಧನೆಯ ಶಿಖರ ಹುಲ್ಲುಹಾಸಿನಂತಾಗಲಿ, ಹಾದಿ ಮುಳ್ಳುಗಳು ಹೂವುಗಳಂತಾಗಲಿ, ಯಶಸ್ಸು ರತ್ನಗಂಬಳಿಯಾಗಲಿ, ನೀನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ, ವರ್ಷದ ಎಲ್ಲಾ ದಿನಗಳು ನಿನಗೆ ಶುಭವಾಗಲಿ, ಶುಭಕಾಮನೆಗಳೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು.

36.ಜನ್ಮದಿನದ ಶುಭಾಶಯಗಳು ಪ್ರಿಯೆ ನೀವು ಸಂತೋಷವಾಗಿರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ನಾನು ಇಂದು ನಿಮಗೆ ಆರೋಗ್ಯಕರ ಜೀವನವನ್ನು ಬಯಸುತ್ತೇನೆ!

37.ನೋವು – ನಲಿವುಗಳ ನಡುವಿನಲ್ಲಿ ನಿನ್ನದೇ ಆದ ಜೀವನದಲ್ಲಿ ಸಂಕಷ್ಟಗಳ ಸಂಕೋಲೆಯಲ್ಲಿ ಸುತ್ತುವರೆದ ಸಾವಿರ ಅಗ್ನಿಕುಂಡದಲ್ಲಿ ಪುಟಿದೆದ್ದ ಬಂಗಾರ ನೀನು. ಇಂದಿನ ನಿನ್ನ ಹುಟ್ಟುಹಬ್ಬ ನಿನಗೆ ಹೊಸ ಜೀವನ ನೀಡಲಿ, ಹಾರೈಕೆಗಳ ಮಹಾಪೂರವೇ ನಿನಗೆ ಹರಿದು ಬರಲಿ. ಹುಟ್ಟುಹಬ್ಬದ ಸಂಭ್ರಮ ಇಡೀ ಜೀವನ ಹಾಗೆ ಇರಲಿ. ನಿನಗೆ ಜನ್ಮದಿನದ ಶುಭಾಶಯಗಳು.

38.ದೇವರು ನಿಮಗೆ ದೀರ್ಘ ಆಯುಷ್ಯ ನೀಡಲಿ ಮತ್ತು ನಿಮ್ಮ ಜೀವನದಲ್ಲಿ ಈ ದಿನವು ಸಾವಿರ ಬಾರಿ ಬರಬಹುದು. ನಿಮಗೆ ನನ್ನ ಹುಟ್ಟುಹಬ್ಬದ ಶುಭಾಶಯಗಳು ನನ್ನ ಸ್ನೇಹಿತ!

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ : ವಚನಗಳು ಮತ್ತು ಲಿಂಗಗಳು, ಕಾಲಗಳು

ವಿಶ್ವ ನಾಗರಿಕ ರಕ್ಷಣಾ ದಿನ

ಪ್ರತಿ ವರ್ಷ ಮಾರ್ಚ್ 1 ರಂದು, ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ