in

ನಿಮ್ಮ ಪುಟ್ಟ ನಗುವಿಗಾಗಿ ಕನ್ನಡ ಜೋಕ್ಸ್ ಗಳು

ಕನ್ನಡ ಜೋಕ್ಸ್
ಕನ್ನಡ ಜೋಕ್ಸ್

ನಗು’ ಹೇಳುವುದಕ್ಕೆ ಎಷ್ಟೊಂದು ಚೈತನ್ಯಯುಕ್ತ ಪದ. ಪ್ರಕೃತಿದತ್ತವಾಗಿ ದೊರೆತಿರುವ ಒಂದು ಸಹಜ ಕ್ರಿಯೆ. ಒಂದು ಸವಿಯಾದ-ಹಿತವಾದ ಅನುಭವವೇ ನಗು. ಮಾನವನ ಅಕರ್ಷಣೀಯ ಹಾಗೂ ಉತ್ತಮ ಮುಖ ಲಕ್ಷಣ ಹೊರ ಹೊಮ್ಮುವುದು ನಗುವಿನಿಂದಾಗಿ. ಬದುಕಿನ “ಜೀವಸೆಲೆ” ನಗುವಿನಲ್ಲಿದೆ. ನಗುವಿನ ಹೊನಲಿಲ್ಲದ ಬದುಕು ಬೆಂಗಾಡಿನಂತೆ. ಸಾಮಾನ್ಯವಾಗಿ ಹೆಣ್ಣು ಧರಿಸುವ ಅಭರಣಗಳಲ್ಲಿ ಪ್ರಕಾಶಮಾನವಾಗಿ ಕಾಣದನ್ನು ಅವಳ ಮುಖದಲ್ಲಿ ಮೂಡುವ ಮುಗುಳ್ನಗೆಯಲ್ಲಿ ಕಾಣಬಹುದು. ಇದು ಅವಳ ಸೌಂದರ್ಯವನ್ನು ದುಪ್ಪಟ್ಟು ವೃದ್ದಿಸುತ್ತದೆ. ಸುಖ-ದುಃಖ, ನೋವು-ನಲಿವು ಜೀವನದ ಸಹಜ ಕ್ರಿಯೆಗಳನ್ನು ನಿಭಾಯಿಸಿಕೊಂಡು ನಗಬಲ್ಲವರು ಭೂಮಿಯಲ್ಲಿಯೇ ಸ್ವರ್ಗವನ್ನು ನಿರ್ಮಿಸಬಲ್ಲ ಶಕ್ತಿಯನ್ನು ಹೊಂದಿದವರಾಗಿರುತ್ತಾರೆ.

ನಿಮ್ಮ ಪುಟ್ಟ ನಗುವಿಗಾಗಿ ಕನ್ನಡ ಜೋಕ್ಸ್ ಗಳು

ಬಹಳ ಕಾಲದಿಂದಲೂ ನಗುವು ಒಂದು ಅತ್ಯತ್ತಮವಾದ ಔಷಧವೆಂದು ಜನರು ಹೇಳುತ್ತಾ ಬಂದಿದ್ದಾರೆ. ಇದರರ್ಥ, ಸಂತೋಷದಿಂದ ಇರುವವರು ಸ್ವಾಭಾವಿಕವಾಗಿ ತಮ್ಮನ್ನು ತಾವು ಗುಣಪಡಿಸಿಕೊಳ್ಳುತ್ತಾರೆ ಎಂಬುದನ್ನು ಎಲ್ಲೋ ಯಾರೋ ತಿಳಿದುಕೊಂಡಿದ್ದಾರೆ ಎಂದಾಯಿತು. ನೀವು ಆರೋಗ್ಯದಿಂದ್ದೀರೋ ಅಥವಾ ಅನಾರೋಗ್ಯದಿಂದ ನರಳುತ್ತಿದ್ದೀರೋ ಎನ್ನುವುದು ನಿಮ್ಮ ಶರೀರವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅದರ ಕಾರ್ಯನಿರ್ವಹಣೆಯು ಉತ್ತಮವಾಗಿದ್ದರೆ, ಅದನ್ನು ಆರೋಗ್ಯವೆಂದು, ಇಲ್ಲದಿದ್ದರೆ ಅದನ್ನು ಅನಾರೋಗ್ಯವೆಂದೂ ಕರೆಯುತ್ತೇವೆ. ನೀವು ಸಂತೋಷವಾಗಿದ್ದಾಗ ನಿಮ್ಮ ಭೌತಿಕ ಶರೀರವು ಅತ್ಯಮೋಘವಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಮ್ಮ ರೋಗವನ್ನು ಗುಣಪಡಿಸುವುದು ನಗುವಲ್ಲ; ಅದನ್ನು ಗುಣಪಡಿಸುವುದು ಸಂತೋಷ. ಆದರೆ, ನಗು ಎಂದರೆ ಸಂತೋಷವಾಗಿರುವುದು ಎಂಬುವಷ್ಟರ ಮಟ್ಟಿಗೆ ಅವೆರಡೂ ಕೂಡಿಕೊಂಡುಬಿಟ್ಟಿದೆ.

ಹಳೆ ಜೋಕ್ಸ್‌ ಅಥವಾ ಹೊಸ ಜೋಕ್ಸ್‌ ಕೇಳಿದಾಗ ನಗು ಬರಲೇಬೇಕು. ಕೆಲವು ಜೋಕ್ಸ್‌ ಎಷ್ಟು ಬಾರಿ ಕೇಳಿದರೂ ನಗು ಬಂದೇ ಬರುತ್ತದೆ. ನಗುವು ಆರೋಗ್ಯಕ್ಕೆ ಒಳ್ಳೆಯದು. ನೀವು ನಕ್ಕರೆ ನಿಮ್ಮ ಸುತ್ತಮುತ್ತಲಿನವರ ಮುಖದಲ್ಲಿಯೂ ನಗು ಮೂಡುತ್ತದೆ. ಒಂದು ಆರೋಗ್ಯಕರ ಸಮಾಜಕ್ಕೆ ನಗು ಅತ್ಯಂತ ಅವಶ್ಯಕ.

ನಕ್ಕಾಗ ಮನಸ್ಸು ಉಲ್ಲಾಸಗೊಂಡು ನೋವು, ದುಃಖ ಮರೆಯುತ್ತದೆ. ನಗದೆ ಇರುವವರ ಜೀವನದಲ್ಲಿ ಒತ್ತಡ ಹೆಚ್ಚಿರುತ್ತದೆ ಎಂದು ಅಧ್ಯಯನಗಳೇ ಹೇಳಿವೆ ಅಂತೆ.

ಕನ್ನಡ ಜೋಕ್ಸ್:

ಜೋಕ್:೧ 

ಕಪ್ಪೆ ಮತ್ತು ಹಾವು

ಕಪ್ಪೆ: ನೀನು ಮೋಸಗಾರ

ಹಾವು: ಸುಳ್ಳು ಹೇಳಬೇಡ

ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು..

ಹಾವು: ದೇವರೇ., ಇಷ್ಟಕ್ಕೆಲ್ಲ ಯಾರದರೂ ಆತ್ಮಹತ್ಯೆ ಮಾಡ್ಕೊತಾರಾ?

ಜೋಕ್: ೨

ಗುಂಡನ ಪಕ್ಕದ ಮನೆಯವನ ಹೆಸರು ಭಗವಂತ ಮತ್ತು ಅವರ ಮಗಳ ಹೆಸರು ಭಕ್ತಿ. ಒಂದು ದಿನ ಗುಂಡನ ಅಮ್ಮ ಹೇಳಿದರು‌

ಅಮ್ಮ: ಗುಂಡ ನೀನು ಯಾವಾಗಲೂ ಭಗವಂತನ ಭಕ್ತಿಯ ಕಡೆ ಸದಾ ಗಮನ ಕೊಡು. ಭಕ್ತಿಗೆ ನಿನ್ನ ಮನವನ್ನು ಅರ್ಪಿಸು.

ಗುಂಡ( ಮನಸ್ಸಿನಲ್ಲಿ): ಅಯ್ಯೋ ಅಮ್ಮಾ ಭಕ್ತಿ ಮೇಲೆ ಮನಸ್ಸು ಇಟ್ಟಿದ್ದೀನಿ, ಆದರೆ ಅವರಪ್ಪ ಭಗವಂತನಿಗೆ ಅದು ಅರ್ಥಾನೇ ಆಗ್ತಿಲ್ಲ.

ನಿಮ್ಮ ಪುಟ್ಟ ನಗುವಿಗಾಗಿ ಕನ್ನಡ ಜೋಕ್ಸ್ ಗಳು

ಜೋಕ್: ೩

ಗಂಡನನ್ನು ಕಿಚಾಯಿಸಲೆಂದೇ ಆಕೆ ಹೇಳಿದಳು: ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ಆರೋಗ್ಯ, ಆಯುಸ್ಸು, ನೆಮ್ಮದಿ ಎಲ್ಲವೂ ಹೆಚ್ಚಂತೆ ಗೊತ್ತಾ? ಯಾಕಿರಬಹುದು ಹೇಳಿ ನೋಡೋಣ?

ಗಂಡ ತಿರುಗುಬಾಣ ಬಿಟ್ಟ: ಯಾಕಂದ್ರೆ ಹೆಂಗಸರಿಗೆ ಹೆಂಡತಿ ಇರಲ್ಲ!!

ಜೋಕ್: ೪ 

ಚಕ್ಕುಲಿ

ಗುರು: ಭೂಮಿ ಯಾವ ಆಕಾರದಲ್ಲಿದೆ?

ಶಿಷ್ಯ: ಚಕ್ಕುಲಿಯಾಕಾರದಲ್ಲಿದೆ ಸಾರ್…

ಗುರು: ಇನ್ನೊಮ್ಮೆ ಒತ್ತಿ ಹೇಳು?

ಶಿಷ್ಯ: ಒತ್ತಿದರೆ ಚಕ್ಕುಲಿ ಹುಡಿಯಾಗಬಹುದು..

ಜೋಕ್:೫

ಚಪ್ಪಲಿ ಅಂಗಡಿಯಲ್ಲಿ

ಅಂಗಡಿಯವನು – ಅಂಗಡಿಯಲ್ಲಿನ ಎಲ್ಲಾ ಬಾಕ್ಸ್ ಗಳಲ್ಲಿ ಇರುವ ಚಪ್ಪಲಿಗಳಲ್ಲಿ ಒಂದನ್ನು ಬಿಡದೆ ನಾನು ನಿಮಗೆ ತೋರಿಸಿದೆ ಮೇಡಂ, ಇನ್ನು ಯಾವುದೂ ಉಳಿದಿಲ್ಲ..

ಮಹಿಳೆ – ಹಾಗಾದರೆ ಅಲ್ಲಿರುವ ಬಾಕ್ಸ್ ನಲ್ಲಿ ಏನಿದೆ?

ಅಂಗಡಿಯವನು- ಮೇಡಂ ನನ್ನ ಮೇಲೆ ಸ್ವಲ್ಪ ಕರುಣೆ ತೋರಿಸಿ, ಆ ಬಾಕ್ಸಲ್ಲಿ ನಾನು ತಿನ್ನೋಕೆ ಅಂತ ತಂದಿರೋ ಲಂಚ್ ಇದೆ.

ಜೋಕ್:೬

ಸ್ಟೂಡೆಂಟ್ 1: ರಿಸಲ್ಟ್ ಬಂದಿದೆ. ಬಾರೋ ನೋಡ್ಕೊಂಡ್ ಬರೋಣ.

ಸ್ಟೂಡೆಂಟ್ 2: ನನಗ್ಯಾಕೋ ನಾನು ಪಾಸ್ ಆಗಿರೋದು ಡೌಟ್ ಮಗಾ. ಅಪ್ಪ ಬೇರೆ ಜೊತೇಲೆ ಇದಾರೆ. ನೀನು ನನ್ನ ರಿಸಲ್ಟ್ ನೋಡಿ ಫೋನ್ ಮಾಡು. ಒಂದು ಸಬ್ಜೆಕ್ಟ್ ಫೇಲ್ ಆಗಿದ್ರೆ ‘ಗುಡ್ ಮಾರ್ನಿಂಗ್‌’ ಅಂತ ಕಳಿಸು. ಎರಡು ಫೇಲ್ ಆಗಿದ್ರೆ ‘ನಿನಗೂ ನಿಮ್ಮಪ್ಪಂಗೂ ಗುಡ್ ಮಾರ್ನಿಂಗ್‌’ ಅಂತ ಕಳಿಸು.

ಸ್ಟೂಡೆಂಟ್ 1: ಸರಿ ಮಗಾ.

ರಿಸಲ್ಟ್ ನೋಡಿದ ಗೆಳೆಯ ಎಸ್ಸೆಮ್ಮೆಸ್ ಮಾಡ್ತಾನೆ.

‘ನಿನಗೂ ನಿಮ್ಮ ಇಡೀ ಫ್ಯಾಮಿಲಿಗೂ ಗುಡ್ ಮಾರ್ನಿಂಗ್ ಮಗಾ’

ಜೋಕ್:೭

೩. ಗಿರಾಕಿ ಮತ್ತು ವ್ಯಾಪಾರಿ

ಗಿರಾಕಿ: ಒಂದು ಕೆ.ಜಿ ಚಿಪ್‌ಗೆ ಎಷ್ಟು ರೂಪಾಯಿ

ವ್ಯಾಪಾರಿ: 80 ರೂಪಾಯಿ

ಗಿರಾಕಿ: ಲೂಸ್ ತಗೊಂಡರೆ.

ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.

ಜೋಕ್: ೮

ಹುಡುಗಿ: ಮೋಡಗಳು ಗುಡುಗಿ ಸದ್ದಾದರೆ ನಿನ್ನ ನೆನಪಾಗುತ್ತದೆ, ತಂಪಾದ ಮಳೆ ಗಾಳಿ ಬೀಸಿದರೆ ನಿನ್ನ ನೆನಪಾಗುತ್ತದೆ. ಮಳೆ ಹನಿಗಳು ಉದುರಲು ಆರಂಭಿಸಿದರೆ ನನಗೆ ನಿನ್ನ ನೆನಪಾಗುತ್ತದೆ‌

ಹುಡುಗ: ಸರಿ ಸರಿ ನನಗೆ ಗೊತ್ತಾಯ್ತು. … ನಿನ್ನ ಛತ್ರಿ ನಮ್ಮ ಮನೇಲೇ ಇದೆ.. ನಾಳೆ ತಂದು ಕೊಡ್ತೀನಿ ಸಾಯಬೇಡ..‌

ಜೋಕ್: ೯

ವಿಮಾನದಲ್ಲಿ ಐದು ಜನ ಬೇರೆ ಬೇರೆ ದೇಶದ ಸ್ನೇಹಿತರು ಪ್ರಯಾಣ ಮಾಡ್ತಾ ಇರ್ತಾರೆ. ಪ್ರಯಾಣದ ನಡುವೆ ಸಿಕ್ಕಾಪಟ್ಟೆ ಮದ್ಯಪಾನ ಮಾಡಿ ಚಿತ್ತಾಗುತ್ತಾರೆ.

ಬ್ರಿಟಿಷ್: ನಾನೀಗ ಮಲ್ಕೋತೀನಿ. ನಿದ್ದೆ ಬರ್ತಿದೆ.

ಅಮೆರಿಕನ್: ನನಗೀಗ ಇಂಟರ್ನೆಟ್ ಬ್ರೌಸ್ ಮಾಡಬೇಕು ಅನಿಸ್ತಿದೆ.

ಜರ್ಮನ್: ನಾನು ಸಿನಿಮಾ ನೋಡ್ತೀನಿ.

ಚೈನೀಸ್: ನಾನು ಹಾಡು ಕೇಳ್ತೀನಿ.

ಇಂಡಿಯನ್: (ಪೈಲಟ್ ಹತ್ರ ಹೋಗಿ ) ಎದ್ದೇಳ್ ಗುರು… ನಾನು ಓಡಿಸ್ತೀನಿ ಪ್ಲೇನು. ಎಲ್ ಬೋರ್ಡ್ ಥರ ಸಿಕ್ಕಾಪಟ್ಟೆ ಸ್ಲೋ ನೀನು.

ಜೋಕ್: ೧೦ 

ಅಪ್ಪ ಮತ್ತು ಮಗ

ಮಗು: ಅಪ್ಪ ಇಲ್ಲಿ ಬಾ

ಅಮ್ಮ: ಈ ತರ ಮರ್ಯಾದೆ ಕೊಡದೆ ಅಪ್ಪನನ್ನು ಕರಕೆಯಬಾರದು ಮಗನೇ, ಅಪ್ಪನನ್ನು ಮರ್ಯಾದೆಯಿಂದ ಕರೀಬೇಕು.

ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ

ಜೋಕ್: ೧೧

ಆಪರೇಷನ್ ನಂತರ ರೋಗಿಯು “ಡಾಕ್ಟರ್ ನಾನು ಈಗ ಎಲ್ಲಾ ಸಮಸ್ಯೆಯಿಂದ ದೂರಾಗಿದ್ದೀನಾ” ಎಂದು ಕೇಳಿದ.

ಆಗ ಬಂದ ಉತ್ತರ “ಮಗು, ಡಾಕ್ಟರ್ ಅವರ ಭೂಮಿ ಮೇಲೇನೇ ಇದ್ದಾರೆ. ನೀನು ಮಾತ್ರ ಇಲ್ಲಿಗೆ ಬಂದಿರೋದು. ನಾನು ಡಾಕ್ಟರ್ ಅಲ್ಲ.. ನಾನು ಚಿತ್ರಗುಪ್ತ” ಅಂತ.

ಜೋಕ್: ೧೨

ಹೆಂಡ್ತಿ ಹೊಸ ಸಿಮ್ ತಗೊಂಡು ಫೋನ್‌ಗೆ ಹಾಕ್ಕೋತಾಳೆ. ಗಂಡನಿಗೆ ನಂಬರ್ ಗೊತ್ತಿರಲ್ಲ. ಅವನನ್ನು ಒಂದ್ಸಲ ಗೋಳು ಹೊಯ್ದುಕೊಳ್ಳೋಣ ಅಂತ ಆಸೆ ಆಗುತ್ತೆ. ಗಂಡ ಹಾಲ್‌ನಲ್ಲಿ ಏನೋ ಕೆಲಸ ಮಾಡ್ತಾ ಕೂತಿರ್ತಾನೆ. ಹೆಂಡ್ತಿ ಅಡುಗೆ ಮನೆಗೆ ಹೋಗಿ ಬಚ್ಚಿಟ್ಕೊಂದು ರಿಂಗ್ ಮಾಡ್ತಾಳೆ. ಗಂಡ ಫೋನ್ ಎತ್ತುತ್ತಾನೆ. ಈಕೆ ಮೆಲುದನಿಯಲ್ಲಿ ಹಲೋ ಅಂತಾಳೆ.

ಗಂಡನೂ ಮೆಲುದನಿಯಲ್ಲೇ ಉಸುರುತ್ತಾನೆ ‘ಹಲೋ ಚಿನ್ನಾ… ಪ್ಲೀಸ್ ಫೋನ್ ಕಟ್ ಮಾಡು, ಈ ಗೂಬೆ ಅಡುಗೆ ಮನೇಲಿದಾಳೆ ಅವಳಿಗೆ ಗೊತ್ತಾದ್ರೆ ಸುಮ್ನೆ ಕಿರಿಕ್ಕು. ನಾನೇ ಆಮೇಲೆ ಮಾಡ್ತೀನಿ’.

ಇದು ಬೇಕಿತ್ತಾ!!?

ನಿಮ್ಮ ಪುಟ್ಟ ನಗುವಿಗಾಗಿ ಕನ್ನಡ ಜೋಕ್ಸ್ ಗಳು

ಜೋಕ್: ೧೩

 ಚಾಲಕನ ವೇತನ

ಬಾಸ್: ನನಗೆ ಒಬ್ಬ ಡ್ರೈವರ್ ಬೇಕು ಸ್ಟಾರ್ಟಿಂಗ್ ಎರಡು ಸಾವಿರ ರೂ. ಕೊಡ್ತೀನಿ

ಗುಂಡ: ಏನ್ ಗ್ರೇಟ್ ಸರ್ ನೀವು ಕಾರ್‌ ಸ್ಟಾರ್ಟಿಂಗ್‌ ಮಾಡಲು ಎರಡು ಸಾವಿರ ಕೊಟ್ರೆ, ದಿನ ಪೂರ್ತಿ ಕಾರು ಓಡಿಸಲು ಎಷ್ಟು ಕೊಡುವಿರಿ?

ಜೋಕ್: ೧೪

ಆತ ಕೆಲವೇ ದಿನಗಳ ಮುಂಚೆ ಆಫೀಸಿಗೆ ಸೇರಿರುತ್ತಾನೆ. ಕಾಫಿ ತರೋಕೆ ಆಫೀಸ್ ಬಾಯ್‌ಗೆ ಫೋನ್ ಮಾಡೋ ಬದಲು ತಪ್ಪಾದ ನಂಬರ್ ಡಯಲ್ ಮಾಡುತ್ತಾನೆ. ಫೋನ್ ಕರೆ ಬಾಸ್ ನಂಬರ್‌ಗೆ ಹೋಗುತ್ತದೆ.

ಹೊಸ ನೌಕರ: ಹಲೋ… ನನ್ನ ಕ್ಯಾಬಿನ್‌ಗೆ ಒಂದು ಕಾಫಿ ತಗೊಂಡ್ ಬಾ. ಎರಡು ನಿಮಿಷದಲ್ಲಿ ಇಲ್ಲಿರಬೇಕು.

ಬಾಸ್: (ಕೋಪ ನೆತ್ತಿಗೇರುತ್ತೆ) ಏಯ್… ಯಾರ ಹತ್ರ ಮಾತಾಡ್ತಾ ಇದ್ದೀಯ ಅಂತ ಗೊತ್ತ ನಿಂಗೆ?

ಹೊಸ ನೌಕರ: ಇಲ್ಲ.

ಬಾಸ್: ನಾನು ಈ ಆಫೀಸಿನ ಬಾಸ್!

ಹೊಸ ನೌಕರ: ಓಹ್ ಹೌದಾ? ನೀವು ಯಾರ ಹತ್ರ ಮಾತಾಡ್ತಾ ಇದ್ದೀರಾ ಅಂತ ಗೊತ್ತಾ ನಿಮ್ಗೆ?

ಬಾಸ್: ಇಲ್ಲ

ಹೊಸ ನೌಕರ: (ತಕ್ಷಣ ಫೋನ್ ಕಟ್ ಮಾಡಿ) ಅಬ್ಬಾ ಸದ್ಯ ಬಚಾವಾದೆ!!!

ಜೋಕ್: ೧೫

ಗಂಡಂದಿರು

ಪಕ್ಕದ ಮನೆ ವ್ಯಕ್ತಿ: ಏನಮ್ಮಾ ನಿನ್ನ ಗಂಡ ಚೆನ್ನಾಗಿದ್ದಾನಾ ?

ಆಕೆ : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಹೇಳ್ತಾ ಇದ್ದೀರಾ?

ಪಕ್ಕದ ಮನೆ ವ್ಯಕ್ತಿ: (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?

ಜೋಕ್: ೧೬

 ಮಕ್ಕಳು

ಭೀಮ: ನಿಂಗೆ ಎಷ್ಟು ಮಕ್ಕಳು

ಸೋಮ: ಹನ್ನೆರಡು, ಹೆಂಡ್ತಿ ಗರ್ಭಿಣಿ

ಭೀಮ: ಅಷ್ಟೊಂದು ಮಕ್ಕಳಾ?

ಸೋಮ: ಹೆಂಡ್ತಿನ ಖಾಲಿ ಹೊಟ್ಟೆಲಿ ಇರಲು ಬಿಡೋಲ್ಲ ಎಂದು ಮಾವನಿಗೆ ಮಾತುಕೊಟ್ಟಿದ್ದೇನೆ..

ಜೋಕ್: ೧೭

ಹೆಂಡ್ತಿ: ಊಟ ಆಯ್ತಾ?

ಗಂಡ: (ಹೆಂಡತಿಯನ್ನು ರೇಗಿಸಲು) ಊಟ ಆಯ್ತಾ?

ಹೆಂಡ್ತಿ: ನಾನು ನಿನ್ನನ್ನ ಕೇಳ್ತಿರೋದು.

ಗಂಡ: ನಾನು ನಿನ್ನನ್ನ ಕೇಳ್ತಿರೋದು.

ಹೆಂಡ್ತಿ: (ಸ್ವಲ್ಪ ರೇಗಿ ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?

ಗಂಡ: (ಇನ್ನೂ ರೇಗಿಸೋಣ ಅಂತ) ನಾ ಹೇಳಿದ್ದನ್ನೇ ಕಾಪಿ ಮಾಡ್ತಿದೀರಾ?

ಹೆಂಡ್ತಿ: ಸರಿ ಬಿಡಿ. ಶಾಪಿಂಗ್ ಹೋಗೋಣ್ವಾ?

ಗಂಡ: ಹೇಯ್… ನಾನು ತಮಾಷೆ ಮಾಡ್ತಾ ಇದ್ದೆ. ನಂದು ಊಟ ಆಯ್ತು.

ಜೋಕ್: ೧೮

 ಗಂಡ ಹೆಂಡತಿ ಜಗಳ

ಹೆಂಡತಿ: ನಿಮ್ಮನ್ನು ಮದುವೆಯಾಗೋ ಬದಲು ನಾನು ಒಬ್ಬ ರಾಕ್ಷಸನ ಮದುವೆ ಆಗಬೇಕಿತ್ತು.

ಗಂಡ: ಹಾಗೆಲ್ಲ ರಕ್ತ ಸಂಬಂಧದಲ್ಲಿ ಮದುವೆ ಆಗಬಾರದು ಕಣೇ.

ನಿಮ್ಮ ಪುಟ್ಟ ನಗುವಿಗಾಗಿ ಕನ್ನಡ ಜೋಕ್ಸ್ ಗಳು

ಜೋಕ್-೧೯

ಒಬ್ಬ ಸರ್ದಾರ್ ಜಿ ಹೆಂಡ್ತಿ ಪ್ರಜ್ಞೆ ತಪ್ಪಿ ಬಿದ್ಲು..

ಡಾಕ್ಟರ್ – ಆಕೆ ಸತ್ತಿದ್ದಾಳೆ…

ಆಕೆ ದೇಹವನ್ನು ಎತ್ತಿಕೊಂಡು ಹೋಗಿ ಅವಳ ಅಂತಿಮ ಸಂಸ್ಕಾರ ಮಾಡಲು ಸಿದ್ಧರಾದರು. ಆಕೆಯ ಚಿತೆಗೆ ಬೆಂಕಿ ಇಡುವ ವೇಳೆಗೆ ಅವಳು ಎದ್ದು ಕುಳಿತು ಅಯ್ಯೋ “ನಾನು ಜೀವಂತವಾಗಿದ್ದೀನಿ .. !!” ರೀ ಅಂದಳು..

ಸರ್ದಾರ್: ಸಾಕು ಬಾಯಿ ಮುಚ್ಚು, ನೀನೇನು ಡಾಕ್ಟರ್ಗಿಂತ ಕಾಸ್ತಿ ತಿಳ್ಕೊಂಡು ಇದ್ಯಾ?

ಬೇಗ ಬೆಂಕಿ ಇಡಿ, ಇಲ್ದೇ ಇದ್ರೆ ಇವಳು ಇನ್ನೂ ಮಾತಾಡ್ತಾನೇ ಇರ್ತಾಳೆ ಅಂದ..

ಜೋಕ್-೨೦

 ಕುದುರೆ ಮತ್ತು ಆನೆ

ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು?

ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳಿಗೆ ಎರಡು ಕಡೆ ಬಾಲವಿರುತ್ತೆ…

ಜೋಕ್: ೨೧

ಹೆಂಡತಿ: ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?

ಗಂಡ : ಷಹಜಹಾನ್ ಗಿಂತ ಹೆಚ್ಚಾಗೇ ಪ್ರೀತಿಸ್ತೀನಿ.

ಹೆಂಡತಿ: ಹಾಗಾದ್ರೆ ನಾನು ಸತ್ತ ಮೇಲೆ ನನಗೆ ನೀವು ಕೂಡಾ ತಾಜ್ ಮಹಲ್ ಅನ್ನು ನಿರ್ಮಾಣ ಮಾಡ್ತೀರಾ?

ಗಂಡ : ಅಯ್ಯೋ ಹುಚ್ಚಿ ನಾನು ಈಗಾಗಲೇ ಜಮೀನು ತಗೊಂಡಿದ್ದೀನಿ, ನೀನೇ ತಡ ಮಾಡ್ತಾ ಇದ್ಯಾ ಅಷ್ಟೇ..

ಜೋಕ್: ೨೨

ಮಾತೃಭಾಷೆ

ಗುಂಡ: ಅಪ್ಪಾ, ಅಪ್ಪಾ.. ಈ ಅರ್ಜಿಯಲ್ಲಿ ‘ಮದರ್ ಟಂಗ್’ ಇರುವಲ್ಲಿ ಏನೆಂದು ಬರೆಯಲಿ?

ಅಪ್ಪ: ತುಂಬ ಉದ್ದದ ನಾಲಗೆ ಎಂದು ಬರೆ

ಜೋಕ್: ೨೩

ಹೊಸದಾಗಿ ಮದುವೆಯಾಗಿತ್ತು…

ಒಂದು ದಿನ ಬೆಳಿಗ್ಗೆ ಗಂಡ ಹೆಂಡತಿಯ ಮೇಲೆ ನೀರು ಎರಚಿದ…

ಹೆಂಡತಿ (ಕೋಪದಿಂದ ನಿದ್ರೆಯಿಂದ ಮೇಲೆದ್ದು) ಯಾಕ್ರೀ ನೀರು ಹಾಕಿದ್ದು ಏನಾಗಿದೆ ನಿಮಗೆ?

ಗಂಡ – ನಿಮ್ಮ ತಂದೆ, “ನನ್ನ ಮಗಳು ಹೂವಿನ ಮೊಗ್ಗಿನ ಹಾಗೆ, ಅದನ್ನು ಒಣಗದೇ ಇರೋ ಹಾಗೆ ನೋಡ್ಕೋ ಅಂದಿದ್ರಲ್ವ.. ಅದಕ್ಕೆ ಕಣೇ”

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಆನ್‌ಲೈನ್ ಶಾಪಿಂಗ್‌

ಆನ್‌ಲೈನ್ ಶಾಪಿಂಗ್‌ನ ಅನುಕೂಲಗಳು ಮತ್ತು ಅನಾನುಕೂಲಗಳು

ವಿಶ್ವ ವನ್ಯಜೀವಿ ದಿನ

ಮಾರ್ಚ್‌ 3ರಂದು, “ವಿಶ್ವ ವನ್ಯಜೀವಿ” ದಿನವನ್ನು ಆಚರಿಸಲಾಗುತ್ತದೆ